A A A A A
Error:
BookNum: 4 Chapter: 7 VerseStart: 87 VerseShouldHave: 86
ಬೈಬಲ್ ಒಂದು ವರ್ಷದಲ್ಲಿ
ಮಾರ್ಚ್ ೫

ಸಂಖ್ಯಾಕಾಂಡ ೭:೧-೮೯
೧. ಮೋಶೆ ದೇವದರ್ಶನದ ಗುಡಾರವನ್ನು ಎತ್ತಿ ನಿಲ್ಲಿಸಿದ ಮೇಲೆ ಅದನ್ನೂ ಅದರ ಸಾಮಾನುಗಳನ್ನೂ ಹಾಗೂ ಬಲಿಪೀಠವನ್ನು ಅದರ ಉಪಕರಣಗಳನ್ನೂ ಅಭಿಷೇಕಿಸಿ ಪ್ರತಿಷ್ಠಿಸಿದನು.
೨. ಆಗ ಇಸ್ರಯೇಲರ ಮುಖ್ಯಸ್ಥರು, ಅಂದರೆ ಗೋತ್ರನಾಯಕರು ಹಾಗೂ ಕುಲಾಧಿಪತಿಗಳಾಗಿದ್ದು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು, ಕಾಣಿಕೆಗಳನ್ನು ತಂದೊಪ್ಪಿಸಿದರು.
೩. ಇಬ್ಬರಿಬ್ಬರು ಒಂದು ಕಮಾನು ಬಂಡಿಯನ್ನೂ ಒಂದು ಜೊತೆ ಎತ್ತುಗಳನ್ನೂ ಅಂತು ಆರು ಬಂಡಿಗಳನ್ನೂ ಆರು ಜೊತೆ ಎತ್ತುಗಳನ್ನೂ ದೇವದರ್ಶನದ ಗುಡಾರದ ಮುಂದೆ ಸರ್ವೇಶ್ವರನ ಸನ್ನಿಧಿಗೆ ತಂದು ಅರ್ಪಿಸಿದರು.
೪. ಸರ್ವೇಶ್ವರ ಸ್ವಾಮಿ ಮೋಶೆಗೆ,
೫. “ಈ ಕಾಣಿಕೆಯ ವಸ್ತುಗಳನ್ನು ಇವರ ಕೈಯಿಂದ ತೆಗೆದುಕೋ; ಇವು ದೇವದರ್ಶನದ ಗುಡಾರದ ಸೇವೆಗೆ ಉಪಯೋಗವಾಗಲಿ. ಲೇವಿಯರಿಗೆ ಅವರವರ ಕೆಲಸಕ್ಕೆ ತಕ್ಕ ಹಾಗೆ ಅವುಗಳನ್ನು ಕೊಡು,” ಎಂದು ಆಜ್ಞಾಪಿಸಿದರು.
೬. ಅಂತೆಯೇ, ಮೋಶೆ ಆ ಬಂಡಿಗಳನ್ನು ಹಾಗೂ ಎತ್ತುಗಳನ್ನು ತೆಗೆದುಕೊಂಡು ಲೇವಿಯರಿಗೆ ಕೊಟ್ಟನು.
೭. ಎರಡು ಬಂಡಿಗಳನ್ನು ಹಾಗೂ ನಾಲ್ಕು ಎತ್ತುಗಳನ್ನು ಗೇರ್ಷೋನ್ಯರಿಗೆ
೮. ನಾಲ್ಕು ಬಂಡಿ ಹಾಗೂ ಎಂಟು ಎತ್ತುಗಳನ್ನು ಮೆರಾರೀಯರಿಗೆ ಅವರವರ ಸೇವೆಗೆ ತಕ್ಕ ಹಾಗೆ ಕೊಟ್ಟನು. ಇವರು ಮಹಾಯಾಜಕ ಆರೋನನ ಮಗ ಈತಾಮಾರನ ಕೈಕೆಳಗೆ ಸೇವೆ ಮಾಡಬೇಕಾಗಿತ್ತು.
೯. ಕೆಹಾತ್ಯರಿಗೆ ಮಾತ್ರ ಏನನ್ನೂ ಕೊಡಲಿಲ್ಲ. ಏಕೆಂದರೆ ದೇವದರ್ಶನದ ಗುಡಾರದ ಸಾಮಾನುಗಳನ್ನು ಸಾಗಿಸುವುದೇ ಅವರಿಗೆ ನೇಮಕವಾದ ಕೆಲಸವಾಗಿತ್ತು. ಅವರು ಅವುಗಳನ್ನು ಹೆಗಲ ಮೇಲೆ ಹೊರಬೇಕಾಗಿತ್ತು.
೧೦. ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಕಾಣಿಕೆಗಳನ್ನು ತಂದು ಅದರ ಮುಂದೆ ಇಟ್ಟರು.
೧೧. ಆಗ ಸರ್ವೇಶ್ವರ ಮೋಶೆಗೆ, “ಒಬ್ಬೊಬ್ಬ ಕುಲಾಧಿಪತಿ ಒಂದೊಂದು ದಿನ ಬಲಿಪೀಠದ ಪ್ರತಿಷ್ಠೆಗಾಗಿ ತನ್ನ ಕಾಣಿಕೆಯನ್ನು ಸಮರ್ಪಿಸಲಿ,” ಎಂದು ಆಜ್ಞಾಪಿಸಿದನು.
೧೨. ಮೊದಲನೆಯ ದಿನ ಕಾಣಿಕೆ ತಂದೊಪ್ಪಿಸಿದವನು ಯೆಹೂದ ಕುಲಾಧಿಪತಿ ಅಮ್ಮೀನಾದಾಬನ ಮಗ ನಹಶೋನ.
೧೩. ಅವನು ತಂದ ಕಾಣಿಕೆಗಳು: ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಬೆಳ್ಳಿಯ ಒಂದು ಹರಿವಾಣ; ೭೦ ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೧೪. ಧೂಪ ದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ.
೧೫. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ;
೧೬. ಪಾಪಪರಿಹಾರಕ ಬಲಿಗಾಗಿ ಒಂದು ಹೋತ;
೧೭. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಅಮ್ಮೀನಾದಾಬನ ಮಗ ನಹಶೋನನು ಸಮರ್ಪಿಸಿದ ಕಾಣಿಕೆಗಳು ಇವೇ.
೧೮. ಎರಡನೆಯ ದಿನ ಇಸ್ಸಾಕಾರ್ ಕುಲಾಧಿಪತಿ ಚೂವಾರನ ಮಗ ನೆತನೇಲನು ತಂದ ಕಾಣಿಕೆಗಳು:
೧೯. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ; ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೨೦. ಧೂಪದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೨೧. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ
೨೨. ಪಾಪಪರಿಹಾರಕ ಬಲಿಗಾಗಿ ಒಂದು ಹೋತ;
೨೩. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಚೂವಾರನ ಮಗ ನೆತನೇಲನು ಕೊಟ್ಟ ಕಾಣಿಕೆಗಳು.
೨೪. ಮೂರನೆಯ ದಿನ ಜೆಬುಲೂನ್ ಕುಲಾಧಿಪತಿ ಹೇಲೋನನ ಮಗ ಎಲೀಯಾಬನು ತಂದ ಕಾಣಿಕೆಗಳು:
೨೫. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೨೬. ಧೂಪದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೨೭. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದಕುರಿ,
೨೮. ಪಾಪಪರಿಹಾರಕ ಬಲಿಗಾಗಿ ಒಂದು ಹೋತ;
೨೯. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಹೇಲೋನನ ಮಗ ಎಲೀಯಾಬನು ಸಮರ್ಪಿಸಿದ ಕಾಣಿಕೆಗಳು.
೩೦. ನಾಲ್ಕನೆಯ ದಿನ ರೂಬೇನ್ ಕುಲಾಧಿಪತಿ ಶೆದೇಯೂರನ ಮಗ ಎಲೀಚೂರನು ತಂದ ಕಾಣಿಕೆಗಳು:
೩೧. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೩೨. ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೩೩. ದಹನ ಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೩೪. ಪಾಪ ಪರಿಹಾರಕ ಬಲಿಗಾಗಿ ಒಂದು ಹೋತ,
೩೫. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು, ಶೆದೇಯೂರನ ಮಗ ಎಲೀಚೂರನು ಸಮರ್ಪಿಸಿದ ಕಾಣಿಕೆಗಳು ಇವೇ.
೩೬. ಐದನೆಯ ದಿನ ಸಿಮೆಯೋನ್ ಕುಲಾಧಿಪತಿ ಚೂರಿಷದ್ದೈಯನ ಮಗ ಶೆಲುಮೀಯೇಲನು ತಂದ ಕಾಣಿಕೆಗಳು:
೩೭. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು.
೩೮. ಧೂಪದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೩೯. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೪೦. ಪಾಪ ಪರಿಹಾರಕ ಬಲಿಗಾಗಿ ಒಂದು ಹೋತ;
೪೧. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಚೂರೀಷದ್ದೈಯನ ಮಗ ಶೆಲುಮೀಯೇಲನು ಸಮರ್ಪಿಸಿದ ಕಾಣಿಕೆಗಳು.
೪೨. ಆರನೆಯ ದಿನ ಗಾದ್ ಕುಲಾಧಿಪತಿ ದೆಗೂವೇಲನ ಮಗ ಎಲ್ಯಾಸಾಫನು ತಂದ ಕಾಣಿಕೆಗಳು:
೪೩. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೪೪. ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೪೫. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೪೬. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೪೭. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ದೆಗೂವೇಲನ ಮಗ ಎಲ್ಯಾಸಾಫನು ಸಮರ್ಪಿಸಿದ ಕಾಣಿಕೆಗಳು.
೪೮. ಏಳನೆಯ ದಿನ ಎಫ್ರಾಯಿಮ್ ಕುಲಾಧಿಪತಿ ಅಮ್ಮೂಹೂದನ ಮಗ ಎಲೀಷಾವನು ತಂದ ಕಾಣಿಕೆಗಳು:
೪೯. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೫೦. ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೫೧. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೫೨. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೫೩. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಅಮ್ಮೀಹೂದನ ಮಗ ಎಲೀಷಾವನು ಸಮರ್ಪಿಸಿದ ಕಾಣಿಕೆಗಳು ಇವೇ.
೫೪. ಎಂಟನೆಯ ದಿನ ಮನಸ್ಸೆ ಕುಲಾಧಿಪತಿ ಪೆದಾಚೂರನ ಮಗ ಗಮ್ಲೀಯೇಲನು ತಂದ ಕಾಣಿಕೆಗಳು:
೫೫. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೫೬. ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೫೭. ಸರ್ವಾಂಗ ಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೫೮. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೫೯. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಪೆದಾಚೂರನ ಮಗ ಗಮ್ಲೀಯೇಲನು ಸಮರ್ಪಿಸಿದ ಕಾಣಿಕೆಗಳು ಇವೇ.
೬೦. ಒಂಬತ್ತನೆಯ ದಿನ ಬೆನ್ಯಾಮಿನ್ ಕುಲಾಧಿಪತಿ ಗಿದ್ಯೋನಿಯ ಮಗ ಅಬೀದಾನನು ತಂದ ಕಾಣಿಕೆಗಳು:
೬೧. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೬೨. ಧೂಪದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೬೩. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೬೪. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೬೫. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಗಿದ್ಯೋನಿಯ ಮಗ ಅಬೀದಾನನು ಸಮರ್ಪಿಸಿದ ಕಾಣಿಕೆಗಳು.
೬೬. ಹತ್ತನೆಯ ದಿನ ದಾನ್ ಕುಲಾಧಿಪತಿ ಅಮ್ಮೀಷದ್ದೈಯನ ಮಗ ಅಹೀಗೆಜೆರನು ತಂದ ಕಾಣಿಕೆಗಳು:
೬೭. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೬೮. ಧೂಪದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೬೯. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೭೦. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೭೧. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಅಮ್ಮೀಷದ್ದೈಯನ ಮಗ ಅಹೀಗೆಜೆರನು ಸಮರ್ಪಿಸಿದ ಕಾಣಿಕೆಗಳು ಇವೇ.
೭೨. ಹನ್ನೊಂದನೆಯ ದಿನ ಆಶೇರ್ ಕುಲಾಧಿಪತಿ ಒಕ್ರಾನನ ಮಗ ಪಗೀಯೇಲನು ತಂದ ಕಾಣಿಕೆಗಳು:
೭೩. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೭೪. ಧೂಪದ್ರವ್ಯ ತುಂಬಿದ್ದ ೧೦ ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೭೫. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೭೬. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೭೭. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಒಕ್ರಾನನ ಮಗ ಪಗೀಯೇಲನು ಸಮರ್ಪಿಸಿದ ಕಾಣಿಕೆಗಳು.
೭೮. ಹನ್ನೆರಡನೆಯ ದಿನ ನಫ್ತಾಲಿ ಕುಲಾಧಿಪತಿ ಏನಾನನ ಮಗ ಅಹೀರನು ತಂದ ಕಾಣಿಕೆಗಳು:
೭೯. ದೇವಸ್ಥಾನದ ನಾಣ್ಯತೂಕದ ಮೇರೆಗೆ ೧೩೦ ಶೆಕೆಲ್ ತೂಕದ ಒಂದು ಹರಿವಾಣ, ೭೦ ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು
೮೦. ಧೂಪದ್ರವ್ಯ ತುಂಬಿದ್ದ ಹತ್ತು ಶೆಕೆಲ್ ತೂಕದ ಒಂದು ಚಿನ್ನದ ಧೂಪಾರತಿ
೮೧. ದಹನಬಲಿಗಾಗಿ ಒಂದು ಹೋರಿ, ಒಂದು ಟಗರು, ಒಂದು ವರ್ಷದ ಕುರಿ,
೮೨. ಪಾಪ ಪರಿಕಾರಕ ಬಲಿಗಾಗಿ ಒಂದು ಹೋತ;
೮೩. ಸಮಾಧಾನ ಬಲಿಗಾಗಿ ಎರಡು ಹೋರಿಗಳು, ಐದು ಟಗರುಗಳು, ಐದು ಹೋತಗಳು ಮತ್ತು ವರ್ಷದ ಐದು ಕುರಿಗಳು. ಇವೇ ಏನಾನನ ಮಗ ಅಹೀರನು ಸಮರ್ಪಿಸಿದ ಕಾಣಿಕೆಗಳು.
೮೪. ಬಲಿಪೀಠವನ್ನು ಅಭಿಷೇಕಿಸಲಾದ ದಿನದಂದು ಇಸ್ರಯೇಲರ ಕುಲಾಧಿಪತಿಗಳು ಅದರ ಪ್ರತಿಷ್ಠೆಗಾಗಿ ಸಮರ್ಪಿಸಿದ ಕಾಣಿಕೆಗಳು ಒಟ್ಟು: ೧೨ ಬೆಳ್ಳಿಯ ಹರಿವಾಣಗಳು; ೧೨ ಬೆಳ್ಳಿಯ ಬಟ್ಟಲುಗಳು; ೧೨ ಚಿನ್ನದ ಧೂಪಾರತಿಗಳು;
೮೫. ಒಂದೊಂದು ಬೆಳ್ಳಿಯ ಹರಿವಾಣ ೧೩೦ ಶೆಕೆಲ್ ತೂಕವುಳ್ಳದ್ದಾಗಿತ್ತು; ಒಂದೊಂದು ಬೆಳ್ಳಿಯ ಬಟ್ಟಲು ೭೦ ಶೆಕೆಲ್ ತೂಕವುಳ್ಳದ್ದಾಗಿತ್ತು; ಆ ಬೆಳ್ಳಿಯ ಪಾತ್ರೆಗಳ ಒಟ್ಟು ತೂಕ ದೇವಸ್ಥಾನದ ನಾಣ್ಯದ ತೂಕದ ಮೇರೆಗೆ ೨೪೦೦ ಶೆಕೆಲ್ ತೂಕ.
೮೬. ಧೂಫದ್ರವ್ಯ ತುಂಬಿದ್ದ ಚಿನ್ನದ ಧೂಪಾರತಿಗಳು ಹನ್ನೆರಡು; ದೇವಸ್ಥಾನದ ನಾಣ್ಯದ ಪ್ರಕಾರ ಒಂದೊಂದರ ತೂಕ ೧೦ ಶೆಕೆಲ್. ಹೀಗೆ ಸರ್ವೇಶ್ವರ ಸ್ವಾಮಿ ಆತನೊಡನೆ ಮಾತಾಡಿದರು.
೮೭. ಸರ್ವೇಶ್ವರ ಸ್ವಾಮಿ ಮೋಶೆಗೆ:
೮೮. “ಆರೋನನು ದೇವಸ್ಥಾನದ ದೀಪಗಳನ್ನು ಹಚ್ಚುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಿಗಿರುವ ಸ್ಥಳಕ್ಕೆ ಬೆಳಕು ಕೊಡುವಂತೆ ನೋಡಿಕೊಳ್ಳಬೇಕೆಂದು ಅವನಿಗೆ ಆಜ್ಞಾಪಿಸು” ಎಂದು ಹೇಳಿದರು.
೮೯. ಅಂತೆಯೇ ಆ ದೀಪಗಳನ್ನು ಕ್ರಮವಾಗಿ ಇಟ್ಟನು.

ಸಂಖ್ಯಾಕಾಂಡ ೮:೧-೨೬
೧. ಆ ದೀಪಸ್ತಂಭದ ಬುಡಭಾಗವೂ ಅದರ ಪುಷ್ಪಾಲಂಕಾರಗಳೂ ಚಿನ್ನದ ನಕಾಸಿ ಕೆಲಸದಿಂದ ಮಾಡಲ್ಪಟ್ಟಿದ್ದವು. ಸರ್ವೇಶ್ವರ ತೋರಿಸಿದ್ದ ಮಾದರಿಯಂತೆ ಮೋಶೆ ಅದನ್ನು ಮಾಡಿಸಿದ್ದನು.
೨. ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದ್ದೇನೆಂದರೆ:
೩. “ನೀನು ಲೇವಿಯರನ್ನು ಇಸ್ರಯೇಲರಿಂದ ಪ್ರತ್ಯೇಕಿಸಿ ಶುದ್ಧೀಕರಿಸು.
೪. ಅವರನ್ನು ಶುದ್ಧೀಕರಿಸುವ ವಿಧಾನ ಇದು: ಅವರ ಮೇಲೆ ಪಾಪ ಪರಿಹಾರಕ ಜಲವನ್ನು ಚಿಮುಕಿಸು. ಅವರು ಕ್ಷೌರ ಮಾಡಿಸಿಕೊಂಡು, ತಮ್ಮ ಬಟ್ಟೆಗಳನ್ನು ಒಗೆದುಕೊಂಡು ತಮ್ಮನ್ನು ಶುದ್ಧಮಾಡಿಕೊಳ್ಳಲಿ.
೫. ಬಳಿಕ ಅವರು ದಹನಬಲಿಗಾಗಿ ಒಂದು ಹೋರಿಯನ್ನೂ ಅದರೊಡನೆ ಸಮರ್ಪಿಸಬೇಕಾದ ಧಾನ್ಯನೈವೇದ್ಯವನ್ನೂ, ಅಂದರೆ ಎಣ್ಣೆಬೆರೆಸಿದ ಗೋದಿಯ ಹಿಟ್ಟನ್ನೂ ಮತ್ತು ಪಾಪಪರಿಹಾರಕ ಬಲಿಗಾಗಿ ಮತ್ತೊಂದು ಹೋರಿಯನ್ನೂ ತೆಗೆದುಕೊಳ್ಳಲಿ.
೬. ಆಗ ನೀನು ಅವರನ್ನು ದೇವದರ್ಶನದ ಗುಡಾರದ ಮುಂದಕ್ಕೆ ಕರೆದುಕೊಂಡು ಬಾ. ಇಸ್ರಯೇಲ್ ಜನರನ್ನು ಸಭೆಸೇರಿಸು.
೭. ಲೇವಿಯರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನಿಲ್ಲಿಸು. ಇಸ್ರಯೇಲರು ಅವರ ಮೇಲೆ ತಮ್ಮ ಕೈಗಳನ್ನು ಇಡಲಿ.
೮. ಲೇವಿಯರು ಇಸ್ರಯೇಲರ ಪರವಾಗಿ ಸರ್ವೇಶ್ವರನ ಪರಿಚರ್ಯ ಮಾಡಲು ಯೋಗ್ಯರಾಗುವಂತೆ ಆರೋನನು ಅವರನ್ನು ಸರ್ವೇಶ್ವರನ ಸನ್ನಿಧಿಯಲ್ಲಿ ನೈವೇದ್ಯದಂತೆ ಸಮರ್ಪಿಸಲಿ.
೯. ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ನೀನು ಸರ್ವೇಶ್ವರನಿಗೆ ಪಾಪಪರಿಹಾರಕ ಬಲಿಗಾಗಿ ಒಂದು ಹೋರಿಯನ್ನು, ಹಾಗು ದಹನಬಲಿಗಾಗಿ ಮತ್ತೊಂದು ಹೋರಿಯನ್ನು ಸಮರ್ಪಿಸಿ ಅವರಿಗಾಗಿ ಪಾಪಪರಿಹಾರವನ್ನು ಮಾಡು.
೧೦. “ನೀನು ಆರೋನನ ಮತ್ತು ಅವನ ಮಕ್ಕಳ ಮುಂದೆ ಲೇವಿಯರನ್ನು ನಿಲ್ಲಿಸಿ ಅವರನ್ನು ನೈವೇದ್ಯದಂತೆ ಸರ್ವೇಶ್ವರನಿಗೆ ಸಮರ್ಪಿಸು.
೧೧. ಹೀಗೆ ಲೇವಿಯರನ್ನು ಇಸ್ರಯೇಲರಿಂದ ಪ್ರತ್ಯೇಕಿಸಿದಾಗ ಅವರು ನನ್ನ ಸೊತ್ತಾಗುವರು.
೧೨. ನೀನು ಅವರನ್ನು ಶುದ್ಧೀಕರಿಸಿ ನೈವೇದ್ಯದಂತೆ ಸಮರ್ಪಿಸಿದ ನಂತರ ಅವರು ದೇವದರ್ಶನದ ಗುಡಾರದ ಪರಿಚರ್ಯೆಯನ್ನು ಮಾಡಲಿ.
೧೩. ಇಸ್ರಯೇಲರಲ್ಲಿ ಇವರೇ ನನಗೆ ಸಂಪೂರ್ಣವಾಗಿ ಸಮರ್ಪಿತರು. ಚೊಚ್ಚಲು ಮಕ್ಕಳಿಗೆ ಬದಲಾಗಿ, ಅಂದರೆ ಇಸ್ರಯೇಲರ ಜೇಷ್ಠಪುತ್ರರಿಗೆ, ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ.
೧೪. ಇಸ್ರಯೇಲರಲ್ಲಿ ಚೊಚ್ಚಲಾದ ಮನುಷ್ಯರೂ ಪಶುಪ್ರಾಣಿಗಳೆಲ್ಲವೂ ನನ್ನ ಸೊತ್ತೆಂಬುದೇನೋ ನಿಜ; ಈಜಿಪ್ಟ್ ದೇಶದಲ್ಲಿ ಚೊಚ್ಚಲಾದುದನ್ನೆಲ್ಲ ಸಂಹರಿಸಿದಾಗ ಇಸ್ರಯೇಲರಲ್ಲಿ ಚೊಚ್ಚಲಾದುದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಾಪಿಸಿಕೊಂಡೆ.
೧೫. ಈಗ ಇಸ್ರಯೇಲರ ಚೊಚ್ಚಲು ಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ.
೧೬. ಇಸ್ರಯೇಲರ ಪರವಾಗಿ ದೇವದರ್ಶನದ ಗುಡಾರದ ಪರಿಚರ್ಯವನ್ನು ನಡೆಸುವುದಕ್ಕೂ ಪಾಪಪರಿಹಾರವನ್ನು ಮಾಡುವುದಕ್ಕೂ ಲೇವಿಯರನ್ನು ಆರಿಸಿಕೊಂಡು ಆರೋನನ ಮತ್ತು ಅವನ ಮಕ್ಕಳ ವಶಕ್ಕೆ ಕೊಟ್ಟಿದ್ದೇನೆ. ಆದುದರಿಂದ ಇಸ್ರಯೇಲರು ದೇವಸ್ಥಾನದ ಹತ್ತಿರಕ್ಕೆ ಬಂದಾಗ ಅವರಿಗೆ ಯಾವ ಅಪಾಯವು ಸಂಭವಿಸುವುದಿಲ್ಲ.”
೧೭. ಸರ್ವೇಶ್ವರ ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆ, ಆರೋನನು ಹಾಗು ಇಸ್ರಯೇಲ್ ಜನರೆಲ್ಲರು ಮಾಡಿದರು.
೧೮. ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು. ಆರೋನನು ಅವರನ್ನು ನೈವೇದ್ಯದಂತೆ ಸರ್ವೇಶ್ವರನ ಸನ್ನಿಧಿಯಲ್ಲಿ ಸಮರ್ಪಿಸಿದನು. ಅವರನ್ನು ಶುದ್ಧೀಕರಿಸುವುದಕ್ಕಾಗಿ ಅವರಿಗೋಸ್ಕರ ಪಾಪಪರಿಹಾರವನ್ನು ಮಾಡಿದನು.
೧೯. ಇದಾದ ಮೇಲೆ ಲೇವಿಯರು ತಮಗೆ ನೇಮಕವಾದ ಕೆಲಸವನ್ನು ದೇವದರ್ಶನದ ಗುಡಾರದಲ್ಲಿ ಆರೋನನ ಮತ್ತು ಅವನ ಮಕ್ಕಳ ಕೈಕೆಳಗೆ ನಡೆಸಲಾರಂಭಿಸಿದರು. ಅವರ ಬಗ್ಗೆ ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.
೨೦. ಇದಲ್ಲದೆ ಸರ್ವೇಶ್ವರ ಮೋಶೆಗೆ ಹೀಗೆಂದು ಆಜ್ಞಾಪಿಸಿದರು:
೨೧. “ಲೇವಿಯರು ಅನುಸರಿಸಬೇಕಾದ ಪದ್ಧತಿ ಇದು - ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನವರು ದೇವದರ್ಶನದ ಗುಡಾರದಲ್ಲಿ ಸೇವೆಮಾಡಲು ಸೇರಬೇಕು.
೨೨. ಅವರು ಐವತ್ತು ವರ್ಷದವರಾದ ನಂತರ ಆ ಸೇವಾ ಸಂಸ್ಥೆಯನ್ನು ಬಿಟ್ಟು ದೇವಸ್ಥಾನದ ಪರಿಚರ್ಯದಿಂದ ನಿವೃತ್ತರಾಗಬೇಕು.
೨೩. ಅಂಥವರು ತಮ್ಮ ಸ್ವಕುಲದವರ ಜೊತೆ ದೇವದರ್ಶನದ ಗುಡಾರವನ್ನು ಕಾಯುವ ಸೇವೆ ಮಾಡಬಹುದು. ಅದೊಂದನ್ನು ಬಿಟ್ಟು ಅವರಿಂದ ಬೇರೆ ಪರಿಚರ್ಯೆಯನ್ನು ಮಾಡಿಸಕೂಡದು. ಲೇವಿಯರು ಮಾಡಬೇಕಾದ ಕರ್ತವ್ಯಗಳನ್ನು ನೀನು ಹೀಗೆ ವಿಧಿಸಬೇಕು.
೨೪. ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ I ನಿನ್ನ ಶರಣನಾದೆ, ನನಗಾಗದಿರಲಿ ತಾತ್ಸಾರ II
೨೫. ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ I ನನ್ನಾಶ್ರಯಗಿರಿ, ದುರ್ಗಸ್ಥಾನವಾಗಿರು ನೀನೆ II
೨೬. ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ I ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ II

ಕೀರ್ತನೆಗಳು ೩೧:೧-೫
೧. ವೈರಿಗಳ ಉರುಲುಬಂಡೆಯಿಂದೆನ್ನನು ರಕ್ಷಿಸು I ಅದರಲಿ ನಾ ಸಿಕ್ಕಿ ಬೀಳುವುದನು ತಪ್ಪಿಸು II
೨. ನನಗಾಧಾರ ನೀನಲ್ಲವೆ? ನನ್ನಾತ್ಮವನು ನಿನಗೊಪ್ಪಿಸಿರುವೆ I ನಂಬಿಕಸ್ತನಾದ ದೇವನೆ, ನೀಯೆನ್ನ ಮುಕ್ತಗೊಳಿಸಿರುವೆ II
೩. ತೀರ್ಪಿನ ದಿನ ನೆರವಾಗದು ಆಸ್ತಿಪಾಸ್ತಿ; ಸನ್ನಡತೆಯಿಂದಲೆ ಮರಣದಿಂದ ವಿಮುಕ್ತಿ.
೪. ನಿರ್ದೋಷಿಯ ಮಾರ್ಗ ಸರಾಗ; ದುಷ್ಟತನದಿಂದ ದುರುಳನ ಪತನ.
೫. ಸಜ್ಜನರ ಬಿಡುಗಡೆ ಸದಾಚಾರದಿಂದ; ವಂಚಕರ ಬಂಧನ ದುರಾಶೆಯಿಂದ.

ಜ್ಞಾನೋಕ್ತಿಗಳು ೧೧:೪-೬
೪. ಪುನಃ ಯೇಸುಸ್ವಾಮಿ, ಅವರಿಗೆ “ಇಲ್ಲಿರುವವರಲ್ಲಿ ಕೆಲವರು ದೇವರ ಸಾಮ್ರಾಜ್ಯವು ಪ್ರಭಾವದೊಡನೆ ಜಗತ್ತಿನಲ್ಲಿ ಪ್ರತ್ಯಕ್ಷವಾಗುವುದನ್ನು ನೋಡದೆ ಮರಣಹೊಂದುವುದಿಲ್ಲ ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದು ಹೇಳಿದರು.
೫. ಆರು ದಿನಗಳ ಬಳಿಕ ಪೇತ್ರ, ಯಕೋಬ ಮತ್ತು ಯೊವಾನ್ನ ಇವರನ್ನು ಮಾತ್ರ ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಯೇಸು ರೂಪಾಂತರ ಹೊಂದಿದರು.
೬. ಆಗ ಅವರ ಉಡುಪು ಅತ್ಯಂತ ಶುಭ್ರವಾಗಿ ಹೊಳೆಯಿತು. ಜಗದ ಯಾವ ಅಗಸನಿಂದಲೂ ಮಡಿಮಾಡಲಾಗದಷ್ಟು ಅದು ಬಿಳುಪಾಯಿತು.

ಮಾರ್ಕನು ೯:೧-೨೯
೧. ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಶಿಷ್ಯರಿಗೆ ಕಾಣಿಸಿತು.
೨. ಆಗ ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು; ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು.
೩. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂದೇ ತಿಳಿಯಲಿಲ್ಲ. ಶಿಷ್ಯರು ಅಷ್ಟು ಭಯಭ್ರಾಂತ ಆಗಿದ್ದರು!
೪. ಅಷ್ಟರಲ್ಲಿ ಮೇಘವೊಂದು ಅವರನ್ನು ಆವರಿಸಿತು. ಅದರೊಳಗಿಂದ, “ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ಈತನ ಮಾತಿಗೆ ಕಿವಿಗೊಡಿ,” ಎಂಬ ವಾಣಿ ಕೇಳಿಸಿತು.
೫. ತಕ್ಷಣ, ಶಿಷ್ಯರು ಸುತ್ತಲೂ ನೋಡಲು ತಮ್ಮೊಂದಿಗೆ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ಕಾಣಲಿಲ್ಲ.
೬. ಅನಂತರ ಯೇಸು ಮತ್ತು ಅವರ ಶಿಷ್ಯರು ಬೆಟ್ಟದಿಂದ ಇಳಿದುಬರುವಾಗ, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು.
೭. ಅಂತೆಯೇ ಶಿಷ್ಯರು ಇದನ್ನು ಯಾರಿಗೂ ಹೇಳಲಿಲ್ಲ; ಆದರೂ ‘ಸತ್ತು ಪುನರುತ್ಥಾನ ಹೊಂದುವುದು’ ಎಂದರೆ ಏನು? ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಂಡರು.
೮. ಅನಂತರ, “ಎಲೀಯನು ಮೊದಲು ಬರಬೇಕಾದುದು ಅಗತ್ಯವೆಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ, ಅದು ಹೇಗೆ?” ಎಂದು ಶಿಷ್ಯರು ಯೇಸುವನ್ನು ಕೇಳಿದರು.
೯. ಅದಕ್ಕೆ ಅವರು, “ ‘ಎಲೀಯನು ಮೊದಲು ಬಂದು ಎಲ್ಲವನ್ನೂ ಸಜ್ಜುಗೊಳಿಸುವನೆಂಬುದೇನೋ ನಿಜ. ಆದರೂ ನರಪುತ್ರನು ಜನರಿಂದ ತೀವ್ರಯಾತನೆಯನ್ನು ಅನುಭವಿಸಿ ಅವರಿಂದ ತಿರಸ್ಕೃತನಾಗಬೇಕು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆಯಲ್ಲವೆ; ಇದು ಹೇಗೆ?
೧೦. ಆದರೆ ನಾನು ನಿಮಗೆ ಹೇಳುವುದೇನೆಂದರೆ, ‘ಎಲೀಯನು ಬಂದಾಗಿದೆ; ಆತನ ವಿಷಯವಾಗಿ ಮೊದಲೇ ಬರೆದಿರುವಂತೆ ಜನರು ತಮ್ಮ ಇಚ್ಛಾನುಸಾರ ಆತನನ್ನು ಹಿಂಸಿಸಿದ್ದೂ ಆಗಿದೆ’,” ಎಂದರು.
೧೧. ಅವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು.
೧೨. ನೆರೆದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು.
೧೩. ಯೇಸುಸ್ವಾಮಿ, “ನಿಮ್ಮ ವಾಗ್ವಾದ ಏನು?” ಎಂದು ಕೇಳಿದರು.
೧೪. ಆ ಗುಂಪಿನಲ್ಲಿದ್ದ ಒಬ್ಬನು, “ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ.
೧೫. ಅವನಿಗೆ ಒಂದು ಮೂಕದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲಾ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ. ಆ ದೆವ್ವವನ್ನು ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ,” ಎಂದನು.
೧೬. ಇದನ್ನು ಕೇಳಿ ಯೇಸು, “ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊಂದಿಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ,” ಎಂದರು.
೧೭. ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ನೆಲಕ್ಕೆ ಅಪ್ಪಳಿಸಿ ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆಕಾರಿದನು.
೧೮. ಯೇಸು, “ಇವನಿಗೆ ಎಷ್ಟು ದಿನದಿಂದ ಹೀಗಾಗುತ್ತಿದೆ?” ಎಂದು ಹುಡುಗನ ತಂದೆಯನ್ನು ವಿಚಾರಿಸಿದರು. ಅದಕ್ಕೆ ಅವನು “ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಗೂ ನೀರಿಗೂ ದೂಡಿದೆ;
೧೯. ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯಮಾಡಿ,” ಎಂದು ಯೇಸುವನ್ನು ಬೇಡಿಕೊಂಡನು.
೨೦. ಅದಕ್ಕೆ ಯೇಸು, “ ‘ಸಾಧ್ಯವಾದರೆ’ ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!” ಎಂದರು.
೨೧. ಆಗ ಆ ಬಾಲಕನ ತಂದೆ, “ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ,” ಎಂದು ಯೇಸುವಿಗೆ ಮೊರೆಯಿಟ್ಟನು.
೨೨. ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, “ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟು ತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ,” ಎಂದರು.
೨೩. ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು ‘ಹುಡುಗ ಸತ್ತುಹೋದ,’ ಎಂದುಕೊಂಡರು.
೨೪. ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದುನಿಂತನು.
೨೫. ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯೇಕವಾಗಿ ಅವರ ಬಳಿಗೆ ಬಂದು, “ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?” ಎಂದು ಕೇಳಿದರು.
೨೬. ಅದಕ್ಕೆ ಯೇಸು, “ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ,” ಎಂದರು.